ಚಿತ್ರ: ೭ ಓ ಕ್ಲಾಕ್
ಸಾಹಿತ್ಯ: ಕೆ. ರಾಮ್ ನಾರಾಯಣ್
ಸಂಗೀತ: ಎಂ.ಎಸ್. ಮಧುಕರ್
ಗಾಯನ: ಕೆ. ಚಿತ್ರ

ಈ ಲೋಕವನ್ನು

ಸರಿದೂಗಿಬಿಡದೆ
ಕೈ ಕೊಟ್ಟ ಆ ಬ್ರಹ್ಮನೂ

ಈ ತಾಯಿ ಬಂದು ನಾನಿರುವೆ ಎಂದು
ಕೈ ಹಿಡಿದಳು ನಮ್ಮನು

ಈ ಭೂಮಿಯ ಆ ಸೂರ್ಯನು ಮರೆತಂಥ ಕಥೆ ಎಲ್ಲಿದೆ?

ಈ ತಾಯಿಯ ವಾತ್ಸಲ್ಯವ ಮರೆತಂಥ ಮನಸೆಲ್ಲಿದೆ?

ಈ ಲೋಕವನ್ನು
ಸರಿದೂಗಿಬಿಡದೆ
ಕೈ ಕೊಟ್ಟ ಆ ಬ್ರಹ್ಮನೂ

ಆ ದೇವರಿಲ್ಲಿ ಇರಲಾಗದೆಂದು ಈ ತಾಯಿಯ ಕಳಿಸಿದ

ನೋವಾಗುವಾಗ ಮರೆಯಾಗಲೆಂದು ಈ ಅಮ್ಮನ ನೆನೆಸಿದ

ನಾ ಮಾಡೊ ಕರ್ಮ ತನಗೆಂದಳೋ
ತಾ ಮಾಡೋ ಧರ್ಮ ನನಗೆಂದಳೋ
ಕರುಣಾಸಿರಿ.. ನೆರಳಾಗಿರಿ
ನಿನರಿಯದ ವಂಚನೆ

ಮಮತಾಮಯಿ |೨|
ಸಹನಾಮಯಿ |೨|
ಶತಕೋಟಿಯ ವಂದನೆ

ಈ ಲೋಕವನ್ನು
ಸರಿದೂಗಿಬಿಡದೆ
ಕೈ ಕೊಟ್ಟ ಆ ಬ್ರಹ್ಮನೂ

ನಾವ್ಯಾರೊ ಎನೊ
ಇಲ್ಲೆಕೊ ಎನೊ
ಯಾರ್ಯಾರದೊ ಸ್ನೇಹವೂ ಉ ಉ

ಗೊತ್ತಗದಾಗ ಎದೆಯಾಳದೊಳಗೆ.. 
ದೂರಾಗದ ಬಂದವು

ಈ ಬಂದಗಳಿಗೆ ಮೊದಲೆಲ್ಲಿದೆ?
ಮಣ್ಣಾದರೂನು ಕೋನೆಯಾಗದೆ
ಉಸಿರಲ್ಲಿರಿ |೨|
ಉಸಿರಾಗುವೆ |೨|
ಹಸಿರಾಗದಾ ಬಂದವೆ
ಈ ಬಾಳಿಗೆ ಮಸಿಯಾಗದೆ

ಹಸಿರಾಗುವ ಭಾವವೆ

ಈ ಲೋಕವನ್ನು
ಸರಿದೂಗಿಬಿಡದೆ
ಕೈ ಕೊಟ್ಟ ಆ ಬ್ರಹ್ಮನೂ

ಈ ತಾಯಿ ಬಂದು ನಾನಿರುವೆ ಎಂದು

ಕೈ ಹಿಡಿದಳು ನಮ್ಮನು

ಈ ಭೂಮಿಯ ಆ ಸೂರ್ಯನು ಮರೆತಂಥ ಕಥೆ ಎಲ್ಲಿದೆ?
ಈ ತಾಯಿಯ ವಾತ್ಸಲ್ಯವ ಮರೆತಂಥ ಮನಸೆಲ್ಲಿದೆ?

ಈ ಲೋಕವನ್ನು
ಸರಿದೂಗಿಬಿಡದೆ

ಕೈ ಕೊಟ್ಟ ಆ ಬ್ರಹ್ಮನೂ

Category: ಕನ್ನಡ ಚಿತ್ರಸಾಹಿತ್ಯ
Category: ೭ ಓ ಕ್ಲಾಕ್ ಚಿತ್ರ
Category: ಕೆ. ರಾಮ್ ನಾರಾಯಣ್ ಸಾಹಿತ್ಯ
Category:Kannada